Wednesday, September 18, 2013

ಹೊಗೆ ಸೀನು

' cutting ಮಾಡ್ಸುದ್ರೆ  pocket shaving free ' ಇಂತಿ ನಿಮ್ಮ barbar ;
' cuttingಗಿಂತ  ಕಡಿಮೆ ಅಂದ್ರೆ,ತಲೆಗೂ ಶೇವಿಂಗೆ ಮಾಡಿ ' ಇಂತಿ ನಿಮ್ಮ customer.

' with style ಹೊಗೆ ಬಿಡಬೇಕು ' ಇಂತಿ ನಿಮ್ಮ smoker ;
' ಹೊಗೆ ಬಿಟ್ಟು ಬೇಗ ಹೊಗೆ ಹಾಕಿಕೊ ' ಇಂತಿ ನಿಮ್ಮ doctor.

' do you love me? hahaha but i dont ' ಇಂತಿ ನಿಮ್ಮ ಅನಾಮಿಕ ;
' i love you and you MUST love me ' ಇಂತಿ ನಿಮ್ಮ ನಕ್ಷತ್ರಿಕ.

'costly ದುನಿಯಾದಲ್ಲಿ ಲವ್ವು-ಪವ್ವು  ಬೇಡ ' ಇಂತಿ ನಿಮ್ಮ owner of pulser ಗಾಡಿ ;
' ನಂಗು girl friend  ಇದ್ದಾಳೆ ' ಇಂತಿ ನಿಮ್ಮ owner of ಪಾನಿಪುರಿ ಗಾಡಿ.

' ರೆಪ್ಪೆ ಮುಚ್ಚದೆ ಚಲುವೆಯನು ನೋಡಬೇಕು ' ಇಂತಿ ನಿಮ್ಮ ಕವಿಹೃದಯ ;
' ಕೆಕ್ಕರಿಸಿದರೆ ಒಂದು ಮೀಟರ್ ಎಳೆದು ಬಾರಿಸುವೆ ' ಇಂತಿ ನಿಮ್ಮ ಪರಹೃದಯ..

ಕಲ್ಕಿ

ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗಿರಬೇಕು?
ಸಾಮಾನ್ಯವಾಗಿ ದೊರೆವ ಉತ್ತರ :- ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ 'ಎಲ್ಲರಂತೆ ಬದುಕುತ್ತ; ಎಲ್ಲರಂತೆ ಮಾತನಾಡುತ್ತ;ಸಮಾಜಕ್ಕೆ ಒಳ್ಳೆಯವನಾಗಿ ಇರಬೇಕು'.
ಎಂತಹ ಆಘಾತಕಾರಿ ಉತ್ತರ!!! 'ಎಲ್ಲರಂತೆ ಬದುಕುತ್ತ;' ಅಂದಾಗ ವ್ಯಕ್ತಿ ತನ್ನ ಸ್ವಂತ ವ್ಯಕ್ತಿತ್ವವನ್ನು ಕಳೆದುಕೊಂಡು ಮಾರಾಟವಾಗುವ ಕ್ಷಣ..... ಎಲ್ಲರಂತೆ ಮಾತನಾಡುತ್ತ;' ಎಂದರೆ ತನ್ನೊಳಗೆ ಏನಿದ್ದರು ಹೊರಪ್ರಪಂಚಕ್ಕೆ ಸರಿದೂಗುವಂತೆ ಪ್ರತಿಕ್ರಿಯಿಸುವ ಅನಿವಾರ್ಯತೆ.... 'ಸಮಾಜಕ್ಕೆ ಒಳ್ಳೆಯವನಾಗಿ ಇರಬೇಕು' ಎಂಬುದರ ಬಗ್ಗೆ ಒಬ್ಬ ಪ್ರಜೆಯಾಗಿ ನಾನು ಉಲ್ಟಾ ಮಾತಾಡಿದ್ರೆ ಅಕ್ಷಮ್ಯ ಅಪರಾಧ ಹಾಗು ಅದಕ್ಕೆ ನನ್ನನ್ನು ನಾನೆ ಕ್ಷಮಿಸುವುದಿಲ್ಲ. ಮಾಂತ್ರಿಕ ಯುಗ ಮಾಯವಾಗಿ ಯಾಂತ್ರಿಕ ತಾಂತ್ರಿಕವಾಗಿರುವ ತನು-ಮನಗಳು ಮನಿ ಎಂಬ ಮಾರಿಗೆ ಮಾರಟವಾಗಿರುವ ಬೆನ್ನಲ್ಲೆ, ಮನಸಾಕ್ಷಿಗೆ ವಿರುದ್ದವಾದರು ಪರವಾಗಿಲ್ಲ ಆದರೆ ಕಾನೂನಿಗೆ ವಿರುದ್ದವಾಗಬಾರದು ಎಂಬ ದೇಶ ಹೆಣೆದ ಚೌವ್ಕಟ್ಟು ಅಚ್ಚುಕಟ್ಟಾಗಿ ನಿಂತಿದೆ. ಆ ಚೌವ್ಕಟ್ಟಿನ ಒಳಗೆ ಬ್ರಷ್ಟಾಚಾರ,ಅತ್ಯಾಚಾರದಂತಹ ಬಿಸಿ ಬಿಸಿ ನಿಪ್ಪಟ್ಟನ್ನು ಹಂಚಿ ತಿನ್ನುವವರ ಒಗ್ಗಟ್ಟನ್ನು ಕಂಡ ಪ್ರತಿ ಭಾರತೀಯನ ಜನ್ಮ ಸಾರ್ಥಕ. ಗೆದ್ರೆ ಕುಣಿಯೋರು ಕಡಿಮೆ,ಬಿದ್ರೆ ನಗೋರೆ ಜಾಸ್ತಿ ಇರುವ ಸುತ್ತಮುತ್ತಲಿನಲ್ಲಿ ಒಳ್ಳೆಯದು ಎಲ್ಲಿ ಅಂತ ಹುಡುಕೋದು ಎಚ್ಚರ ಪ್ರಜ್ಞೆ ಇರುವ ಮನುಷ್ಯರ ಮೂರ್ಖತನ. ಇಲ್ಲಿ ಯಾವುದೆ ನಿರಾಷೆಯನ್ನು ಬಿಂಬಿಸುವ ಅಥವಾ ಆತ್ಮಾವಲೋಕನದ ಉದ್ದೇಶವಾಗಲಿ ಇಲ್ಲ.ಇವೆಲ್ಲದರ ಬಗ್ಗೆ ಅದೆಷ್ಟೋ ಜನರು ಮಿತಿಮೀರಿ ಚಿಂತಿಸಿದ ಪುರಾವೆಗಳಿವೆ.ಇಷ್ಟೇನ ಪ್ರಪಂಚ? ಎಂದು ಪ್ರಶ್ನಿಸಿಕೊಳ್ಳುವಷ್ಟರಲ್ಲಿ 'ಇಷ್ಟೇ ಪ್ರಪಂಚ ಹಾಗು ಹೊರಗೆ ಕಾಣೋದೆ ಸತ್ಯವಂತ ನಂಬೋದು ಬೂದಿ ಮುಚ್ಚಿದ ಕೆಂಡದಂತಿರುವ ಬಾಹ್ಯ ಬದುಕಾಗಿಬಿಡುತ್ತೆ '.ಕಲಿಯುಗವನ್ನು ಬದಲಿಸಲು ಕಲ್ಕಿ ಬರ್ತಾನೆ ಅನ್ನೊ ಅಜ್ಜನ ಮಾತು ಕೂಡ ಚಂದಮಾಮ ಕಥೆಯ ಪುಸ್ತಕದಲ್ಲಿ ಪುಟವಾಗಿ ಹೋಯ್ತು...