Wednesday, November 27, 2013

ಧರ್ಮೋ ರಕ್ಷತಿ ರಕ್ಷಿತಹ

ಅಶ್ವ ಅಲಂಕೃತ ಸಾರಥಿಸಿದ್ದ ಬಲಿಷ್ಠ ರಥವು ಬರುತಿರಲು
ಬುಜಕೆ ಪಟ್ಟಿ, ಭರಿತ ಬತ್ತಳಿಕೆ, ವಜ್ರಕಿರೀಟವು ಹೊಳೆದಿರಲು

ಸಮರವೀರನು ಆಗಮಿಸುತಿರಲು ವೈರಿಗಳೆದೆಯಲಿ ನರ್ತನ
ಕಹಳೆಯೊಂದಿಗೆ ರಣರಂಗದೊಳು ಪಸರಿಸಿದೆ ಭಯದ ಕಂಪನ

ಎಷ್ಟು ಉಳಿವರೊ, ಅದೆಷ್ಟು ಉರುಳುವರೊ, ಲೆಕ್ಕಿಸಲಾಗದು ಬಹುಶಹ
ದ್ವಜದೊಂದಿಗೆ ಬರುತಿಹನು ಘೋಷಿಸುತ ' ಧರ್ಮೋ ರಕ್ಷತಿ ರಕ್ಷಿತಹ '.

-ಕವಿಹೃದಯ ಅರುಣ

Wednesday, November 13, 2013

ಮಧುಮಗಳ ಚಿಂತೆ



ಚಂದದ ಬ್ರಹ್ಮಚಾರಿಗಳ  ರಾಶಿಯ ಸಂತೆ
ಆ ಸಂತೆಯಲಿ ರಾಶಿ-ನಕ್ಷತ್ರಗಳ ಚಿಂತೆ

ಮಿತಿಮೀರಿದ ನನ್ನಿಷ್ಟಗಳ ಮೂಟೆಯ ಬಾರ
ಯಾರು ಬಾರವನೆಲ್ಲ ಹೊತ್ತು ನಡೆಯುವ ಪೋರ

ಅವರು ಇವರು ತವರೆಂಬ ಹಲವು ಮನೆಯುಂಟು 
ಶಾಶ್ವತ ನೆಲೆ ಕೊಡಲಿಹನು ಬಿಗಿದು ಮೂರು ಗಂಟು

ಎಷ್ಟು ಜನರೊಡನೆ ಬೆರೆತರೂ ಏಕಾಂತವಿದೆ ನಂತರ 
ಹೆಜ್ಜೆ ಹೆಜ್ಜೆಗೂ ಜೊತೆಗಿರುವವ ಇಡಿಸುವನು ಕಾಲುಂಗುರ

ಹಣೆಯಲಿ ಯಾರ ಹೆಸರೆಂಬ ಗೊಂದಲಕೆ ಏಕೆ ಮನ ಜಾರಿತೆ
ಗೊಂದಲ ಮರೆಸಿ ನನ್ನಾಗಿಸುವ ಅರಿಶಿನ ಕುಂಕುಮ ಶೋಬಿತೆ


- ಕವಿಹೃದಯ