Wednesday, August 21, 2013

ಒಲವಿನ ಪದ್ಯ


ಆ ನಿನ್ನ ನಯನವು ಮಿಡಿದ ಒಲವಿನ ಪದ್ಯ ......ಪುಟಗಳ ಮದ್ಯ
ನವಿಲು ಗರಿಯಂತ ರೆಪ್ಪೆಗಳ ಬಡಿತದ ಮೋಡಿಗೆ......ನಾಚಿತು ಕಾಡಿಗೆ

ನಿನ್ನ ನಗೆಯ ಇಣುಕಾಟದಲಿ ತಾರೆಗಳ ಗುಂಪು......ಚಂದ್ರ ಮೂಲೆಗುಂಪು
ಮಂದಹಾಸದಿ ಚೆಲುವೆಯು ಚೆಲ್ಲಿದ ನಗುವಿನ ಚಿತ್ರಣ......ಮನದಲಿ ಮುದ್ರಣ

ಪುಟ್ಟ ಕಂಠ ಕಂಪಿಸುವ ಸ್ವರಗಳ ನುಡಿತ......ಕವಿಹೃದಯಕೆ ಮಿಡಿತ
ಸ್ವಪ್ನದಲ್ಲಿ ಸುಳಿವಿಲ್ಲದೆ ಪ್ರಕಟವಾದ ವದನ......ಮರೆಯಾದ ನಿದ್ದೆ ಗಮನ

1 comment:

  1. hi KK,
    Firstly Hearty Congrats on starting your Blog :)
    ಶುಭವಾಗಲಿ....
    ಹರಿಯಲಿ ಭಾವಲಯ ಮಿ೦ದ ಬರವಣಿಗೆಗಳು....
    ರೂಪ

    ReplyDelete