Saturday, August 31, 2013

ಪ್ರೇಮದ ಕಾದಂಬರಿ

 

ಬಹಿರಂಗ ಮೌನವಾದರೇನು ಅಂತರಂಗ ನಿನ್ನೆ ಬಯಸಿದೆ
ಕಂಡರು ಕಾಣದಂತೆ ನಿಂತರೂ ಮನ ಪೂರ್ತಿ ತುಂಬಿಹೆ
ಹಠಮಾಡದ  ಹೃದಯ ಪ್ರೀತಿಗಾಗಿ ಸ್ವಾರ್ಥಿ ಆಗಿದೆ
ಎಂದೂ ಬಯಸದ ಆಸೆ ಇಂದು ನನ್ನನು ಕಾಡಿದೆ... 
 
ನಲ್ಲೆ ಎದುರು ನಿಂತರೆ ಸ್ವರ್ಗವೇ ಈ ಧರೆ
ಎದುರು ಇಲ್ಲವಾದ ಕ್ಷಣ ಬದುಕು ಬಂಜರೆ
ಬದುಕಿನ ಪಯಣದಿ ಎಂದೆಂದೂ ಜೊತೆಗಿರೆ
ಪ್ರೀತಿಯ ಪುಟಗಳಲಿ ನನಗಾಗೆ ಉಳಿದಿರೆ... 
 
ಪ್ರಜ್ವಲಿಸುವ ಕಂಗಳ ಭೂಲೋಕ ಸುಂದರಿ
ಆ ಮಿಟುಕಿಸೊ ರೆಪ್ಪೆಗಳ ಮುಂದಿಲ್ಲ  ನವಿಲುಗರಿ 
ಬಣ್ಣಿಸಲಾಗದ ಬಂಗಾರದ ಹುಡುಗಿಯ ಪರಿ
ನಿನಗಾಗಿ ಬರೆದಿಹೆನು ಪ್ರೇಮದ ಕಾದಂಬರಿ...

1 comment:

  1. ಓದಿದ ಆಕೆ ಬಳ್ಳಿಯಂತೆ ಬೀಗಿದಪ್ಪಿ
    ಕೊಟ್ಟರಂತೆ ನೂರಾರು ಪಪ್ಪಿ

    ReplyDelete